<ಮಂಕುತಿಮ್ಮನ ಕಗ್ಗ
<ಮಂಕುತಿಮ್ಮನ ಕಗ್ಗ-ಕಂತು ೧೧.
ಮಂಕುತಿಮ್ಮನ ಕಗ್ಗ;:ಅರ್ಥಸಹಿತ
ಪದ್ಯ– ೩೩೧/331
ಸತ್ಯ ಶಿವ ಸುಂದರದ ಸಚ್ಚಿದಾನಂದನದ ।
ಭಿತ್ತಿಯಲಿ ಬಣ್ಣಬಣ್ಣದ ಜೀವಚಿತ್ರ।।
ನಿತ್ಯ ನೀನದ ನೆನೆದು ಚಿತ್ರದಲಿ ಮನವಿರಿಸೆ ।
ವೃತ್ತಿ ತನ್ಮಯವಹುದೊ – ಮಂಕುತಿಮ್ಮ ।।
 ಸಚ್ಚಿದಾನಂದನದ = ಸತ್+ಚಿತ್+ಆನಂದನದ, ನೀನದ = ನೀನು + ಅದ, ಮನವಿರಿಸೆ =ಮನವ+ಇರಿಸೆ, ತನ್ಮಯವಹುದೊ = ತನ್ಮಯವು+ಅಹುದೊ,
 ಶಿವ = ಶುಭ, ಬಿತ್ತಿಯಲಿ + ಪಟದಲಿ, ಮನವಿರಿಸೆ = ತನ್ಮಯನಾದರೆ, ವೃತ್ತಿ=ಕಾಯಕ.
 ಜಗತ್ತಿನ ಸೃಷ್ಟಿಯ ಚಿತ್ರ, ಸತ್ಯವಾಗಿಯೂ ಮಂಗಳಕರವಾಗಿಯೂ,ಸುಂದರವಾಗಿಯೂ ಇದ್ದು, ಸಚ್ಚಿದಾನಂದ ಸ್ವರೂಪದಿಂದಿದೆ. ಪ್ರತಿ ನಿತ್ಯ ನೀನು ಅಂತಹ ಚಿತ್ರದಲ್ಲಿ ನಿನ್ನ ಚಿತ್ತವನು ಇರಿಸಿದರೆ ನೀ ಮಾಡುವ ಕೆಲಸ ತನ್ಮಯತೆಯಿಂದ ಕೂಡಿರುತ್ತದೆ ಎಂದು ನಾವು, ಈ ಪರಮಾತ್ಮನ ಸೃಷ್ಟಿಯಲ್ಲಿ ಏನನ್ನು ಮತ್ತು ಜಗಚ್ಚಿತ್ರವನ್ನು ಹೇಗೆ ಕಾಣಬೇಕು.
ಮಂಕುತಿಮ್ಮನ ಕಗ್ಗ - ಡಿ.ವಿ.ಜಿ.
♠೫೫೫೫೫೫೫೫೫೫೫೫೫೫೫೫೫೫♠
-೦♦♦♣♣♣♣♣♣♣♣♣♣♣♣♦♦೦-

ನೋಡಿ
<ಮಂಕುತಿಮ್ಮನ ಕಗ್ಗ-ಕಂತು ೧೧. ಅರ್ಥ ಸಹಿತ
ಮಂಕುತಿಮ್ಮನ ಕಗ್ಗ-ಕಂತು ೧೩.> ಅರ್ಥ ಸಹಿತ
ಪರಿವಿಡಿ

ಉಲ್ಲೇಖ
 ಮಂಕುತಿಮ್ಮನ ಕಗ್ಗ
ವರ್ಗ: ಡಿ.ವಿ.ಜಿ. ಸಾಹಿತ್ಯ